"ಪರಿವರ್ತನೆ ಜಗದ ನಿಯಮ" ಎಂದು ಗುರುಗಳು ಆಶ್ರಮದಲ್ಲಿ ಪ್ರವಚನವನ್ನು ಮಾಡುವಷ್ಟರಲ್ಲಿ, ಪಶ್ಚಿಮ ಘಟ್ಟದ ಮಧ್ಯೆ, ಸಹಸ್ರಾರು ವೃಕ್ಷಗಳ ನಡುವೆ, ಅದೆಂದೋ ಭೂಮಿಯನ್ನು ಸೇರಿದ ಅರಳಿಯ ಬೀಜವೊಂದು, ಆಗತಾನೆ ಮೊಳಕೆ ಬಿರಿದು ಹೊರಬಂತು.
ಮತ್ತಾವುದೋ ಹಿರಿಯ ಮರದ ತುದಿಯಲ್ಲಿದ್ದ ಒಣಗಿದ ಎಲೆಯೊಂದು, ತೇಲಿ, ತಿರುಗಿ, ಗಿರಕಿ ಹೊಡೆದು, ಭುವಿಯನ್ನು ಸೇರಿತು.
ಆಶ್ರಮದ ಎದುರಿಗಿದ್ದ ಟೀ ಅಂಗಡಿಯಲ್ಲಿ ಬೆಳಗಿನ ಬಿಸಿ ಚಹಾ ಹೀರುತಿದ್ದ ತಿಮ್ಮ, ಇದಾವುದರ ಅರಿವಿಲ್ಲದೆ, ತನ್ನ ಗುಜುರಿಯ ಸೈಕಲ್ಲನ್ನೇರಿ, ಮುಂದಿನ ಕಸದ ತೊಟ್ಟಿಯಲ್ಲಿ ತನ್ನ ಬದುಕನ್ನರಸಿ ಹೊರಟ !!

Good one maga keep writing
ReplyDelete