ಕಣ್ಣು ಕಾಣದವನಿಗೆ ಕಾಣದ ಸೂರ್ಯ,
ಕಿವಿಯೇ ಕೇಳದವನಿಗೆ ಕೇಳದ ಕೋಗಿಲೆಯ ಸದ್ದು,
ಮಾತನಾಡದವನ ಮನದಾಳದ ಮಾತನರಿಯಲಾಗದ ನಾವು,
ಇವುಗಳಲ್ಲಿ ಕೊರತೆ ಇರುವುದು ನಮ್ಮಲ್ಲೋ ಅವರಲ್ಲೋ ..
ಒಳದನಿಗೆ ಓಗೊಡದ ಕೊರತೆ,
ತರಂಗಗಳ ಅಂತರಂಗವ ತಲುಪುವ ವಿಫಲತೆ,
ಅಗೋಚರವನು ಆಚರಿಸದ ಅಂಧಕಾರ,
ಅನುಭವಿಸಲು ಬೇಕಿರುವುದು ಅರಿವೇ ಹೊರತು ಪಂಚೆಂದ್ರಿಯವಲ್ಲ ..!
No comments:
Post a Comment